ಶುಂಠಿ , ಲಿಂಬೆ ಜ್ಯೂಸ್ ಬೆರೆಸಿ ಕುಡಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ
ಇತ್ತೀಚಿನ ಕಾಲದಲ್ಲಿ ತಮ್ಮ ಬದಲಾದ ಜೀವನಶೈಲಿಯಿಂದ ಪ್ರತಿಯೊಬ್ಬರೂ ಅನುಭವಿಸುತ್ತಿರುವ ಒಂದು ಸಾಮಾನ್ಯ ಕಾಯಿಲೆ ಎಂದರೆ ಅದು ಗ್ಯಾಸ್ ಟ್ರೀಟಿಸ್ ಅಥವಾ ಗ್ಯಾಸ್ಟ್ರಬಲ್. ಈ ಕಾಯಿಲೆ ನೋಡಲು ಮತ್ತು ಕೇಳಲು ಸಾಮಾನ್ಯ ವಾಗಿ ಮತ್ತು ಸರಳವಾಗಿ ಕಂಡರೂ, ಇದರ ಪರಿಣಾಮ ಮಾತ್ರ ಬಹಳ ತೊಂದರೆದಾಯಕ. ಮೊದಲು ಹೊಟ್ಟೆ ನೋವಿನಿಂದ ಶುರುವಾಗಿ ನಂತರ ಹೊಟ್ಟೆಯಲ್ಲಿ ಉರಿ, ಅಜೀರ್ಣ ಕೊನೆಗೆ ಹೊಟ್ಟೆಯ ಹುಣ್ಣಿನಲ್ಲಿ ಕೊನೆಗೊಳ್ಳುತ್ತದೆ. ಇಂತಹ ಎಲ್ಲ ಸಮಸ್ಯೆ ಗಳಿಗೂ ಇದನ್ನೊಂದು ಟ್ರೈ ಮಾಡಿ ನೋಡಿ.
ಶುಂಠಿ–ನಿಂಬೆ ಯನ್ನು ಆಹಾರದಲ್ಲಿ ವಿವಿಧ ರೀತಿಯಲ್ಲಿ ಸೇರಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇದು ಮಲಬದ್ಧತೆ, ಆಯಾಸ, ಗಂಟಲು ನೋವು, ಎದೆನೋವು ನಿವಾರಿಸುತ್ತದೆ ಶುಂಠಿ–ನಿಂಬೆ ಯ ರಸವನ್ನು ಲಿಂಬೆಯೊಂದಿಗೆ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು ಗುಣವಾಗುತ್ತವೆ. ಇದು ನಿಮ್ಮ ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ.
ಶುಂಠಿ–ನಿಂಬೆ ಪಾನೀಯ ಕುಡಿಯುದರಿಂದ ಆಗುವ ಪ್ರಯೋಜನ :
- ಹೊಟ್ಟೆ ಬೊಜ್ಜು ಕರಗಿಸುತ್ತೆ ಈ ನಿಂಬು ಶುಂಠಿಯ ಪಾನೀಯ
- ದೇಹವನ್ನು ಬೆಚ್ಚಗಿರಿಸುತ್ತದೆ
- ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ
- ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಕಾಯಿಲೆಗಳಲ್ಲಿ ಪರಿಣಾಮಕಾರಿ, ಚಯಾಪಚಾಯ ಹೆಚ್ಚಿಸುವುದು.
- ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಪುಷ್ಟಿ ನೀಡುತ್ತದೆ ರಕ್ತದೊತ್ತಡವನ್ನು ನಿಯಂತ್ರಸುವಲ್ಲಿ ಸಹಕಾರಿ
- ಹೊಟ್ಟೆಯುರಿ-ಹುಳಿತೇಗುಗಳಿಂದ ರಕ್ಷಿಸುತ್ತದೆ
- ಶುಂಠಿಯಲ್ಲಿರುವ ಕೆಲವು ಪೋಷಕಾಂಶಗಳು ಪುರುಷರಲ್ಲಿ ಫಲವತ್ತತೆಯನು ಹೆಚ್ಚಿಸುವ ಕ್ಷಮತೆ ಹೆಚ್ಚಿಸುತ್ತದೆ.


