Spread the love

Jamun Juice for diabetes

ಒಂದೊದು ಹಣ್ಣು ಒಂದೊಂದು ರೀತಿಯ ಆರೋಗ್ಯ ಲಾಭ ನೀಡುತ್ತದೆ. ಅದೇ ರೀತಿ ನೇರಳೆ ಹಣ್ಣು ಸೇವಿಸುವುದರಿಂದ
ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ದೊರೆಯುತ್ತದೆ. ನೇರಳೆ ಹಣ್ಣಿಗೆ ಕೆಲವೊಂದು ರೋಗಗಳನ್ನು
ನಿಯಂತ್ರಿಸುವ ಶಕ್ತಿ ಇದೆ.

        ಪ್ರಕೃತಿ ನಮಗೆ ಅನೇಕ ರೀತಿಯ ಹಣ್ಣುಗಳನ್ನು ನೀಡಿದೆ. ಅದನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿಕೊಂಡರೆ ಬಹುತೇಕ ಆರೋಗ್ಯ ಸಮಸ್ಯೆಗಳಿಂದ ನೀವು ಹೊರ ಬಂದಂತೆ. ಮಕ್ಕಳು ಮಾತ್ರವಲ್ಲ, ಯುವಕರು, ಮಧ್ಯಮ ವಯಸ್ಕರು, ವೃದ್ಧರು ಕೂಡಾ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.

ನೇರಳೆ ಹಣ್ಣು ಸವಿಯಲು ಎಷ್ಟು ರುಚಿಯೋ ಅಷ್ಟೇ ಆರೋಗ್ಯಕ್ಕೆ ಒಳ್ಳೆಯದು ಕೂಡಾ. ಕೇವಲ ಹಣ್ಣು ಮಾತ್ರವಲ್ಲ ಅದರೊಳಗಿನ ಬೀಜವೂ ಸಹ ಔಷಧೀಯ ಗುಣಗಳನ್ನು ಹೊಂದಿದೆ. ಹಣ್ಣನ್ನು ತಿಂದು ಬೀಜವನ್ನು ಉಗುಳುತ್ತಿರುವ ಅಭ್ಯಾಸವಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ. ಬೀಜವನ್ನು ಸಂಗ್ರಹಿಸಿ ಅವುಗಳನ್ನು ಪುಡಿ ಮಾಡಿ ಶೇಖರಿಸಿಟ್ಟುಕೊಳ್ಳುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ.

ಮಧುಮೇಹಿಗಳಿಗೆ ತುಂಬಾ ಒಳ್ಳೆಯದು   

          ನೇರಳೆ ಹಣ್ಣಿನ ಜೊತೆಗೆ, ಅದರ ಬೀಜಗಳು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಮಧುಮೇಹಿಗಳು ನೇರಳೆ ಬೀಜಗಳನ್ನು ತಿನ್ನುವ ಮೂಲಕ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು. ನೇರಳೆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಒಂದು ಟೀ ಚಮಚ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯಿರಿ.

ರಕ್ತವನ್ನು ಶುದ್ಧೀಕರಿಸುತ್ತದೆ

          ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುವುದಲ್ಲದೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತವನ್ನು ಶುದ್ಧೀಕರಣದ ಜೊತೆಗೆ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ರಕ್ತದ ಒತ್ತಡವನ್ನೂ ಕಡಿಮೆ ಮಾಡುತ್ತದೆ. 

ಹೃದಯ ಸಂಬಂಧಿ ಕಾಯಿಲೆಗೆ ಪರಿಹಾರ

        ನೇರಳೆ ಹಣ್ಣು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಕಿಡ್ನಿ ಕಲ್ಲುಗಳಿಂದ ಬಳಲುತ್ತಿರುವವರಿಗೆ ಕೂಡಾ ನೇರಳೆ ಹಣ್ಣು ಬಹಳ ಸಹಕಾರಿ.

ನಿಯಮಿತವಾಗಿ ನೇರಳೆ ಹಣ್ಣನ್ನು ಸೇವಿಸುವುದರಿಂದ ಅಜೀರ್ಣ ಸಮಸ್ಯೆಯನ್ನು ದೂರ ಮಾಡಬಹದು. ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕರುಳಿನ ಸಮಸ್ಯೆ ಮತ್ತು ಕ್ಯಾನ್ಸರ್​ ರೋಗದಿಂದ ಮುಕ್ತಿ ಪಡೆಯಬಹುದು.

https://prakrithifoods.com/store/