ಪುನರ್ಪುಳಿ ಭಾರತದ ಪಶ್ಚಿಮಘಟ್ಟ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಹಣ್ಣಿನ ಮರ.
ಮುರುಗಲ ಹಣ್ಣು, ಕೋಕಂ ಮುರುವನ ಹುಳಿ, ಮೂರ್ಗಿನಹುಳಿ ಮರ, ಬಿರಿಂಡ ಅಥವಾ ಪುನರ್ಪುಳಿ ಇದರ ಪರ್ಯಾಯ ನಾಮಗಳು.
ಕೋಕಂಹಣ್ಣಿನ ಉಪಯೋಗಗಳು ಹೇಳುತ್ತಾ ಹೋದರೆ ಬಹಳಷ್ಟಿವೆ. ಕೋಕಂಹಣ್ಣು, ಸಿಪ್ಪೆ, ತಿರುಳು, ರಸ ಯಾವುದರಲ್ಲೂ ರಾಜಿ ಮಾಡಿಕೊಳ್ಳದೆ ಒಂದೊಂದರಲ್ಲಿ ಒಂದೊಂದು ಬಗೆಯ ಉಪಯೋಗಗಳಿವೆ.
ಉಪಾಗಿ (ಮಂತುಳ್ಳಿ), ಮಂಗೊಸ್ಟೀನ್, ದೇವನಹುಳಿ, ದೇವಗರಿಗೆ ಮುಂತಾದ ಮರಗಳಿಗೆ ಹತ್ತಿರ ಸಂಬಂಧಿಯಾದ ಇದು ಅವುಗಳಂತೆಯೇ ಗಾರ್ಸೀನಿಯ ಎಂಬ ಜಾತಿಗೆ ಸೇರಿದೆ. ಕರ್ನಾಟಕದ ಮತ್ತು ಕೇರಳದ ವೈನಾಡಿನ ಕಾಡುಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ನೆಡುತೋಪು ಬೆಳೆಯಾಗಿ ಬೆಳೆಯಲು ಸೂಕ್ತವಾದ ಹಣ್ಣು ಅಥವಾ ಸಾಂಬಾರು ಬೆಳೆ.
ಕೋಕಂಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಲಕ್ಷಣಗಳಿದ್ದು ದೇಹದ ಚರ್ಮಕ್ಕೆ ನಾನಾ ರೀತಿಯಲ್ಲಿ ಸಹಕಾರಿ. ಚರ್ಮದ ಮೇಲೆ ಉಂಟಾಗುವ ಅಲರ್ಜಿಯ ಕಲೆಗಳನ್ನು ಮತ್ತು ಚರ್ಮದ ಮೇಲಿನ ಸುಟ್ಟ ಗಾಯಗಳಿಗೆ ಕೋಕಂಹಣ್ಣು ಸಹಕಾರಿ. ಇನ್ನೂ ಮುಂದುವರಿದು ಕೋಕಂಹಣ್ಣು ಲಿಪ್ ಬಾಮ್, ಲೋಷನ್, ಸೋಪುಗಳು ಮತ್ತು ಇನ್ನಿತರ ದೇಹಕ್ಕೆ ಉಪಯೋಗವಾಗುವ ವಸ್ತುಗಳಲ್ಲಿ ಉಪಯೋಗಿಸಲ್ಪಡುತ್ತದೆ.
ಕೋಕಂ ಹಣ್ಣು ದೇಹದ ನಿರ್ಜಲೀಕರಣವಾಗುವುದನ್ನು ತಡೆಯುವ ಶಕ್ತಿ ಹೊಂದಿದೆ. ಅಂದರೆ ಯಾವುದೇ ಒಬ್ಬ ಡಿ ಹೈಡ್ರೇಟ್ ಆದ ಅಥವಾ ನಿರ್ಜಲೀಕರಣಗೊಂಡ ವ್ಯಕ್ತಿಗೆ ಕೋಕಂ ಹಣ್ಣಿನ ಸಿಪ್ಪೆಯ ರಸವನ್ನು ಕೊಟ್ಟಿದ್ದೇ ಆದರೆ, ಆತನಿಗೆ ತಕ್ಷಣ ದೇಹ ಉತ್ತೇಜನ ಗೊಂಡಂತಹ ಅನುಭವ ಆಗುತ್ತದೆ.
ಪುನರ್ಪುಳಿ ಹಣ್ಣಿನ ಜ್ಯೂಸು ಕುಡಿಯುದರಿಂದ ಮುಖ್ಯ ಪ್ರಯೋಜನಗಳು.
1. ಅತಿಸಾರ ಆಮಶಂಕೆ ಗಳಿಗೆ ಪುನರ್ಪುಳಿ ಹಣ್ಣು ರಾಮಬಾಣ
2. ದೇಹದ ಜೀರ್ಣಾಂಗದ ವ್ಯವಸ್ಥೆಗೆ ಒಳ್ಳೆಯದು
3. ದೇಹದ ನಿರ್ಜಲೀಕರಣವನ್ನು ನಿಯಂತ್ರಿಸುತ್ತದೆ
4. ಲಿವರ್ ಅಥವಾ ಯಕೃತ್ ರಕ್ಷಣೆಗೆ ಬಲು ಪ್ರಯೋಜನಕಾರಿ.
5. ದೇಹದ ತೂಕದ ನಿರ್ವಹಣೆಯಲ್ಲಿ ಪುನರ್ಪುಳಿ ಸಹಾಯಕ
6. ಅನೇಕ ಭಯಂಕರ ಕಾಯಿಲೆಗಳನ್ನು ನಿಯಂತ್ರಿಸುತ್ತದೆ.